ಶುಕ್ರವಾರ, ನವೆಂಬರ್ 04, 2011

‎"ಪ್ರೇಮ ಪಾಠ"
"ಬರೆದೆ ನಾನೊಂದು ಹಾಳೆಯ ಮೇಲೆ  
ಅವಳ ಕುರಿತಾದ ಭಾವನೆಯ.,
ಬರೆದಾದ ಮೇಲರಿವಿಗೆ ಬಂತು 
ಅದಾಗಿದೆ ಪ್ರೇಮ ಪತ್ರವೆಂದು. <3

ಆದರೂ ಕೊಟ್ಟೆ ಅವಳಿಗಾ ಪತ್ರವ 
ನನ್ನೆಲ್ಲಾ ಕನಸುಗಳ ತುಂಬಿ.. :)
ಅವಳೇನು ಮಾಡಿಬಿಟ್ಟಳು..???? 
ನೋಡದೇ ಗಾಳಿಯಲಿ ತೂರಿಬಿಟ್ಟಳು..!! :'(

ಅರಿಯಲಿಲ್ಲವಳು ಅದು ಬರಿ ಪತ್ರವಾಗಿರದೇ
ನನ್ನ ಹೃದಯವಾಗಿತ್ತೆಂದು..!!
ಕಣ್ತೆರೆದು ನೋಡಲಿಲ್ಲವಳು ನನ್ನೀ ಹೃದಯ 
ಒಡೆದು ಚೂರಾಗಿ ರೋಧಿಸುತ್ತಿರುವದೆಂದು..!!

ಪ್ರೀತಿಗೆ ಕಣ್ಣಿಲ್ಲವೆಂದರಿತ್ತಿದ್ದೆ 
ನಾನೆಂದೋ..??
ಪ್ರೀತಿಸುವವರಿಗೂ ಕಣ್ಣಿಲ್ಲವೆಂದರಿತೆ 
ನಾನಿಂದು..!!"

ಪ್ರೀತಿ-ಪ್ರೇಮಗಳೇ ಹೀಗೇನೋ..??
ಬರೀ ಪಾಠಗಳೇ ತುಂಬಿವೆಯೇನೋ..??

2 ಕಾಮೆಂಟ್‌ಗಳು:

 1. ಹೌದಲ್ಲ ಗೌಡ್ರೆ..?
  ಏನಕ್ಕೆ ಪ್ರೀತಿಲಿ ಮೋಸ ಹೋಗುವವರೇ,,, ನೋವು ಉಣ್ಣುವವರೇ ಹೆಚ್ಚು?

  ಪ್ರೀತಿ ಪ್ರೇಮಗಳಲ್ಲೇ ಪಾಠವೇನು?
  ಜೀವನವೇ ಒಂದು ಪಾಠ ಶಾಲೆ ಅಲ್ಲವೇನು?

  ಭಾವುಕ ಕವನ ಚೆನ್ನಾಗಿದೆ...

  ಪ್ರತ್ಯುತ್ತರಅಳಿಸಿ
 2. ಆಕೆ ತೂರಿದ್ದು ನಿಮ್ಮ ಹೃದಯವನ್ನಷ್ಟೇ ಅಲ್ಲ, ಆಕೆಯ ಚೆಲುವ ಬದುಕನ್ನು, ನಿಚ್ಚಳ ಒಲವನ್ನು, ಆಕೆಗಾಗಿಯೇ ಅರಳಿದ ಹೂವನ್ನು...

  ನಿಜ ಆಕೆ ಕುರುಡಿಯೇ ಇರಬಹುದು...

  ಕುರುಡಾದ (ನಿರ್ಮಲ) ನಿಮ್ಮ ಪ್ರೇಮದಂತೆ

  ಪ್ರತ್ಯುತ್ತರಅಳಿಸಿ