ಶನಿವಾರ, ಅಕ್ಟೋಬರ್ 08, 2011

" ಮನಸು "


ಮನಸು ಬಯಿಸಿತೊಂದು ಮನಸ
ಆ ಮನಸು ಈ ಮನಸ ಮೇಲೆ
ಮನಸು ಮಾಡಲಿಲ್ಲ...!

ಕನಸು ಕಂಡ ಮನಸು
ನನಸಾಗಿಸುವಷ್ಟರಲ್ಲೇ...,
ಕನಸಿನೊಂದಿಗೆ ಆ ಮನಸೇ ಮಾಯ..!! :) :( 

"ಒಂದು ಪ್ರೇಮ ಪತ್ರ"


ಕಾಣಲಿಲ್ಲ ನಾ ನಿನ್ನ ಮೊಗವನೆಂದೂ..! 
ಆದರೂ...,
ಅರಿತೆ ನಾ ನಿನ್ನ ಮನವನೆಂದೋ..!!

ಕೇಳಲಿಲ್ಲ  ನಾ ನಿನ್ನ ದ್ವನಿಯನೆಂದೂ..!
ಆದರೂ...,
ತಿಳಿಸುವೆ ನಾ ನನ್ನ ಹೃದಯದ ಮಾತನಿಂದು..!!

ಸಂಧಿಸಲಿಲ್ಲ ನಾ ನಿನ್ನನೆಂದಿಗೂ.!

ಆದರೂ...,
ಮನ ಬಯಸುತಿದೆ ನಿನ್ನನೆಂದೆಂದಿಗೂ.!

ಕನಸು ಕರಗುವ ಮುನ್ನ ಭಾವಗಳರಳಿಸು..!
ಮನಸು ಬಾಡುವ ಮುನ್ನ ಹೃದಯೊಪ್ಪಿಸು..!!


"ಮುಕ್ತ ಮುಕ್ತ"

ಮಣ್ಣ ತಿಂದು ಸಿಹಿ ಹಣ್ಣಕೊಡುವ ಮರ ನೀಡಿ ನೀಡಿ ಮುಕ್ತ.
ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ.
                                                                                        ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ
ಮರೆಯುವುದುಂಟೆ.?ಮರೆಯಲಿ ನಿಂತೆ ಕಾಯುವ ಕರುಣಾಮಯಿಯ

'ತನ್ನಾವರಣವೇ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ.?'
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೆ ಜೀವನ್ಮುಕ್ತಿ

ಹೂ ಮೊಗವಾಡದ ಇರಿಯುವಮುಳ್ಳೇ ಎಲ್ಲಿವರೆಗೆನಿನ್ನಾಟ.? 
ಬೆಳಕಿನ ಕೂಸಿಗೆ ಕೆ೦ಡದ ಹಾಸಿಗೆ,  ಕಲಿಸಿದೆ ಜೀವನ ಪಾಠ.

ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ
ತಡೆಯೆ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೊರಾಟ


ಶುಕ್ರವಾರ, ಅಕ್ಟೋಬರ್ 07, 2011

'ಮುಕ್ತ'

ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ


ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೆ ಜೀವ..
ದಾಟಿ ಈ ಪ್ರವಾಹ..??
'ತಾನು ಬೆಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ.
ನಿಶ್ಚಯದ ಮುರ್ತರೂಪ..!!'


ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ...??
ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಅದೇನೆ ಬಂಧ ಮುಕ್ತ...!!


ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂದ ಮುಕ್ತಿ
ಎಂದು ಆದೇವು ನಾವು ಮುಕ್ತ.., ಮುಕ್ತ.., ಮುಕ್ತ....??


ಬುಧವಾರ, ಅಕ್ಟೋಬರ್ 05, 2011

'ನಿರಶನ - ಪ್ರಹಸನ'
ಉಪವಾಸ..! ಉಪವಾಸ..!!
ಎಲ್ಲೆಲ್ಲೂ ನಡೆದಿದೆ ಉಪವಾಸ.
ಮಾಡಿ ಮಾಡಿ ಉಪವಾಸ
ಮಡಿದವರಾರನು  ಕಾಣೆ..!


ದಿನನಿತ್ಯ ತಿನ್ನಲನ್ನವಿಲ್ಲದೇ
ಅನ್ಯ ದಾರಿ ಕಾಣಲಾಗದೇ.
ಉಪವಾಸ ಮಾಡಿ ಮಾಡಿ
ಮಡಿದ ಬಡ ಜನರೆಷ್ಟೋ..??


ಅನೇಕಾನೇಕ ಕಾರಣಗಳಿಗಾಗಿ
ಮಾಡಿದರು ಉಪವಾಸ..!
ಇಲ್ಲ ಸಲ್ಲದ ಕಾರಣಗಳಿಗಾಗಿಯೂ
ಮಾಡುವರು ಉಪವಾಸ..!!


ಇದುಕೊನೆಗಾಣುವದೆಂದೋ.?


ಈ ಬಡಜನರುಪವಾಸವ
ತೊಲಗಿಸಲುಪವಾಸ
ಮಾಡಿದವರಾರನು ಕಾಣೆ..!
ಭಾಸವಾಗುತಿದೆ ನಿರಶನವೆಂಬುದೇ,

ಮಹಾ ಪ್ರಹಸನವೆಂದು...!! :((

https://www.facebook.com/note.php?note_id=184520264930285


"ಮನ್ವಂತರ"


"ಮರಳಿ ಬಾ ಮನ್ವಂತರವೆ ಕಂಬನಿಗಳ ಬಳಿಗೆ,
ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ.

ಕಣ್ಣೀರೆ ಕಡಲಾಗಿ... ಭಾವಗಳೊ ಬರಡಾಗಿ.
ಮನದ ಮರಳ ತುಂಬಾ ನೋವಿನಲೆಯಬಿಂಬ

ಮನಸಿನ ಪುಟಗಳ ನಡುವೆ ನೆನಪಿನ ನವಿಲು ಗರಿ
ಕಾರ್ಮುಗಿಲ ಅಂಚಿನಲ್ಲಿ ಭರವಸೆಯ ಹೊನ್ನಝರಿ,

ನೀಡು ಬಾ ಮನ್ವಂತರವೆ ಭಾವಕೆ ಉಸಿರನ್ನು
ಬರಡು ಹೃದಯಗಳಿಗೆ ಜೀವದ ಹಸಿರನ್ನು "ಸೋಮವಾರ, ಅಕ್ಟೋಬರ್ 03, 2011

ನಾನೇ.., ಒಡೆಯ...!!


ನಿನ್ನ ಕುರಿತು ನಾನು ಬರೆದ
'ಒಲವಿನ ಅಕ್ಷರ'ಗಳಿಗೆ
ನಾನೇ...., ಒಡೆಯ..! :)

'ಆ ಅಕ್ಷರ'ಗಳನ್ನೋದಿದ
ನನ್ನೊಲವಿನ ಗೆಳತಿ
ನಿನಗೆ ನಾನೇ ಒಡೆಯ..!! :-))