ಭಾನುವಾರ, ಮೇ 08, 2011

ಜನ್ಮದಿನದ ಶುಭಾಶಯಗಳು


ಭೇಟಿಯಾಗಲು ಮರೆತ ಗೆಳೆತಿಯ..,


'ಹುಟ್ಟು ಹಬ್ಬ'ಕ್ಕೆ...! 


ಮುಖ ಪುಸ್ತಕದಲ್ಲಿ ಪರಿಚಯವಾದ ಗೆಳತಿ,
ನಾವು ಭೇಟಿಯಾಗೋಣವೆಂದ ಗೆಳತಿ,
ಮನಕೆ ಕುತೂಹಲ ಮೂಡಿಸಿದ ಗೆಳತಿ,
ಇಪ್ಪತ್ನಾಲ್ಕು ವಸಂತ ಪೂರೈಸಿದ ಗೆಳತಿ,
ನನ್ನೀ ಕವಿತೆಗೆ ಸ್ಪೂರ್ತಿಯಾದ ಗೆಳತಿ,
ನಮ್ಮಯ ಭೇಟಿಗೆ ನಿನ್ನದೆಂದು ಸಮ್ಮತಿ..?


ನೆನಪಿರಲಿ..! ನಮ್ಮ ಭೇಟಿಯಲಿ,
ಆಡಬಾರದ ಮಾತು ಮನದಲ್ಲುಳಿಯಲಿ,
ಮನದಾಳದ ಮಾತು ಹೊರಹೊಮ್ಮಿಬರಲಿ,
ಈ ನನ್ನ ಉಡೊಗೊರೆ ಹೇಗೇ ಇರಲಿ..,
ಈ ನಿನ್ನ ರಜತ ಹುಟ್ಟುಹಬ್ಬದಲಿ,
ತುಂಬಿರಲಿ ಸಂತಸ ನಿನ್ನ ನಯನ ದಲಿ..!


    ಶುಭವಾಗಲಿ......!!!!!!

2 ಕಾಮೆಂಟ್‌ಗಳು:

  1. ಗೌಡ್ರೆ, ನಿಮ್ಮ ಗೆಳತಿಗೆ ನನ್ನ ವತಿಯಿಂದಲೂ ಶುಭ ಹಾರೈಕೆ...ಸ್ಪೂರ್ತಿಯ ಗೆಳತಿ ಆದಷ್ಟು ಬೇಗ ಬಂದು ಬಿಡಲಿ...ಕವಿತೆ ಚೆನ್ನಾಗಿದೆ..

    ಪ್ರತ್ಯುತ್ತರಅಳಿಸಿ
  2. ಹ್ಹ ಹ್ಹ Thanq ಮೌನರಾಗ.., ಅವಳೆಲ್ಲಿಗೆ ಬರಬೇಕು..??
    ಮೌನವಾಗೇ ನಿಮ್ಮ ಶುಭಹಾರೈಕೆಯನ್ನು ಅವಳಿಗೆ ತಿಳಿಸುತ್ತೇನೆ. :-)

    ಪ್ರತ್ಯುತ್ತರಅಳಿಸಿ