ಶುಕ್ರವಾರ, ನವೆಂಬರ್ 11, 2011

‎"ವಿಜಯ ದುಂಧುಬಿ..!!"


ಬಿಟ್ಟ ಬಾಣ
ಇಟ್ಟ ಗುರಿಯನ್ನು
ಮುಟ್ಟಿಯಾಗಿದೆ..!


ಸುಳ್ಳಿನ ಬೂದಿಯು
ಹಾರಿ ಹೋಗಿದೆ..!
ಸತ್ಯದ ಕೆಂಡವು
ಝಗಮಗಿಸುತಲಿದೆ..!!


ಸೋಗಲಾಡಿಗಳ ಕನ್ನಡ
ಮುಖವಾಡ ಕಳಚಿ ಬಿದ್ದಿದೆ..!
ನಿಜ ಕನ್ನಡಿಗರ 
'ವಿಜಯ ದುಂಧುಬಿ' ಮೊಳಗುತಲಿದೆ..!


ಏರುತಲಿದೆ., ಹಾರಾಡುತಲಿದೆ.,
ಮುಗಿಲೆತ್ತರದಲ್ಲಿ ವಿಜೃಂಭಿಸುತಿದೆ.!
ಕನ್ನಡಮ್ಮನ ಕೀರ್ತಿಯ
ವಿಜಯ ಪತಾಕೆ...!!


'ರಣಹೇಡಿ'ಗಳ ಧಿಕ್ಕರಿಸಿ
'ರಣಕಲಿ'ಗಳ'ಜೈಕರಿಸಿ
ವಿಜಯವನ್ನಾಚರಿಸುತ
ಸಂಭ್ರಮಿಸೋಣ..!


ಜೈ ಭುವನೇಶ್ವರಿ..!!1 ಕಾಮೆಂಟ್‌:

  1. ಅರ್ಥವಾಯಿತು ಗೌಡ್ರೆ....
    ಸತ್ಯ ಯಾವತ್ತಿದ್ದರೂ ಬೂದಿ ಮುಚ್ಚಿದ ಕೆಂಡವೇ....ಸುಟ್ಟುರೂ ಸರಿಯೇ ಹೊರ ಬಂದೆ ಬರುತ್ತದೆ...
    ನಿಜದ ಅರ್ಥದ ಕವಿತೆ....
    ಚೆನ್ನಾಗಿದೆ...

    ಪ್ರತ್ಯುತ್ತರಅಳಿಸಿ