ಬುಧವಾರ, ಅಕ್ಟೋಬರ್ 05, 2011

"ಮನ್ವಂತರ"


"ಮರಳಿ ಬಾ ಮನ್ವಂತರವೆ ಕಂಬನಿಗಳ ಬಳಿಗೆ,
ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ.

ಕಣ್ಣೀರೆ ಕಡಲಾಗಿ... ಭಾವಗಳೊ ಬರಡಾಗಿ.
ಮನದ ಮರಳ ತುಂಬಾ ನೋವಿನಲೆಯಬಿಂಬ

ಮನಸಿನ ಪುಟಗಳ ನಡುವೆ ನೆನಪಿನ ನವಿಲು ಗರಿ
ಕಾರ್ಮುಗಿಲ ಅಂಚಿನಲ್ಲಿ ಭರವಸೆಯ ಹೊನ್ನಝರಿ,

ನೀಡು ಬಾ ಮನ್ವಂತರವೆ ಭಾವಕೆ ಉಸಿರನ್ನು
ಬರಡು ಹೃದಯಗಳಿಗೆ ಜೀವದ ಹಸಿರನ್ನು "2 ಕಾಮೆಂಟ್‌ಗಳು: