ಸೋಮವಾರ, ಡಿಸೆಂಬರ್ 12, 2011

ಎರಡೂ ಒಂದೇ..! (1+1=1)




ದೇಹವೊಂದೇಯಾದರೂ.,
ಮನಸುಗಳೆರಡು..! :)
ನೋಟವೊಂದೇಯಾದರೂ.,
ಕಣ್ಣುಗಳೆರಡು..! 


ಶ್ರವಣವೊಂದೇಯಾದರೂ.,
ಕಿವಿಗಳೆರಡು..!
ವಾಸನೆ ಗ್ರಹಿಕೆವೊಂದೇಯಾದರೂ.,
ಮೂಗಿನ ರಂಧ್ರಗಳೆರಡು..! 


ಪ್ರೇಮವೊಂದೇಯಾದರೂ.,
ಜೀವಗಳೆರಡು..! ♥ ♥
ಮದುವೆವೊಂದೇಯಾದರೂ.,
ಕುಟುಂಬಗಳೆರಡು..!


ಸೃಷ್ಠಿಯಾಗೋ ಜೀವವೊಂದೇಯಾದರೂ..,
ಮಿಲನವಾಗೋ ಜೀವಗಳೆರಡು..! ;) (1+1=1)



ಶುಕ್ರವಾರ, ಡಿಸೆಂಬರ್ 02, 2011

ನಿನ್ನದೇ ನೆನಪು..! ♥














ಬಂದಾರಾ ಬಾರೇss..
ಬಿಟ್ಟಾರೆ ಬೀsಡೆ
ನನಗೇನು ಆಗssಬೇಕು..??


ನೀನಾಗೆ ಬಂದಾsರೆ..,
ಕಣು ತುಂಬಾ ನೋಡುವೆ..
ಮನಸಾರೆ ಹಾಡುವೆ..! ♥ ♥


ನೀನು ಬರದೇ ಹೋದಾರೇss..?


ನೀನು ಬರದೇ ಹೋದಾರೇ..
ಸುಮ್ಮನೇ ಕಾಲ ಕಳೆಯುವೆss..
ನಿನ್ನ ನೆನಪಲ್ಲೇss..! :/

ಮಂಗಳವಾರ, ನವೆಂಬರ್ 22, 2011

ಒಲವಿನಿರುಳ ಪಯಣ..!!















ಬೆಳಕೇ ಕಾಣದ ದಾರಿಯಲ್ಲಿ 
ಕಡು ಕಗ್ಗತ್ತಲೆಯಲ್ಲಿ..
ಕಣ್ಣು ಕುರುಡಾಗಿಸಿ ಹೋದ 
ಅವಳ ಅಂದಿನಾ ಒಲವು..:( ♥ 


ಇಂದಿನಿರುಳ ಅಂಧಕಾರವ ಸೀಳಿ 
ಅವಳ ಬಳಿ ಸುಳಿವಷ್ಟು.
ಸಾಮಾರ್ಥ್ಯವಾದರೂ ಹೊಂದಿದೆಯೇ 
ಇವನ ಇಂದಿನೀ ಒಲವು..?? :) ♥ ♥

ಶನಿವಾರ, ನವೆಂಬರ್ 19, 2011

ಕಾಣದೂರಿನ ಸೆಳೆತ..!!












ಬಾ ಬಾ ಎಂದು ಕರೆಯುತಿದೆ..
ಬಾ ಬಾ ಎಂದು ಕೂಗುತಿದೆ..
ಕಾಣದೂರೊಂದು ಬಳಿ ಬಾ
ಎಂದು ಕೈ ಬೀಸಿ ಕರೆಯುತಿದೆ..!! :((


ಕನಸಿನೂರ ಸಂತೆ ಕರಗಿ,
ಮನಸ ತುಂಬಾ ಚಿಂತೆ ಕಾಡಿ..,
ಕೈ ಬೀಸಿ ಕರೆದ ಕಾಣದೂರು
ಬಂತೆಂದು ಮನ ಸಾರುತಿದೆ.!! :(


ಕಣ್ಣುಗಳು ಕುರುಡಾಗಿ..
ಕಿವಿಗಳು ಕಿವುಡಾಗಿ..
'ತಾಳ್ಮೆಯೇ ತಾಳ್ಮೆ'ಗೆಟ್ಟಂತಾಗಿ.
ಕಾಣದೂರು ಎದುರು ಬಂದಾಗಿದೆ..! :(


ಹರೆಯ ತುಂಬಿ ಉಕ್ಕಿ ಹರಿವ ಸಮಯ.
ಕಾಣದೂರು ಸೆಳೆದಪ್ಪಿ ಮುದ್ದಾಡುತಿದೆ.
ವಿಕಟಟ್ಟಹಾಸಗೈದು ನಗುತಿದೆ
ನನಗಾರು ಸಾಟಿಯೆಂದು..?? :'(



(ಅರ್ಪಣೆ:'ಕಾಲ'ವನ್ನೆದುರಿಸಲಾಗದೇ 'ಕಾಲ'ನಿಗೆ ಬಲಿಯಾದ ಕನ್ನಡದ ಯುವ ಪ್ರತಿಭಾನ್ವಿತ ಗಾಯಕ "ದಿ||ಆದಿತ್ಯನಾಡಿಗ್" ಅವರ ಆತ್ಮಕ್ಕೆ. ಹಾಗೂ ನೊಂದ ಎಲ್ಲಾ ಮನಸುಗಳಿಗೆ)

ಶುಕ್ರವಾರ, ನವೆಂಬರ್ 11, 2011

‎"ವಿಜಯ ದುಂಧುಬಿ..!!"














ಬಿಟ್ಟ ಬಾಣ
ಇಟ್ಟ ಗುರಿಯನ್ನು
ಮುಟ್ಟಿಯಾಗಿದೆ..!


ಸುಳ್ಳಿನ ಬೂದಿಯು
ಹಾರಿ ಹೋಗಿದೆ..!
ಸತ್ಯದ ಕೆಂಡವು
ಝಗಮಗಿಸುತಲಿದೆ..!!


ಸೋಗಲಾಡಿಗಳ ಕನ್ನಡ
ಮುಖವಾಡ ಕಳಚಿ ಬಿದ್ದಿದೆ..!
ನಿಜ ಕನ್ನಡಿಗರ 
'ವಿಜಯ ದುಂಧುಬಿ' ಮೊಳಗುತಲಿದೆ..!


ಏರುತಲಿದೆ., ಹಾರಾಡುತಲಿದೆ.,
ಮುಗಿಲೆತ್ತರದಲ್ಲಿ ವಿಜೃಂಭಿಸುತಿದೆ.!
ಕನ್ನಡಮ್ಮನ ಕೀರ್ತಿಯ
ವಿಜಯ ಪತಾಕೆ...!!


'ರಣಹೇಡಿ'ಗಳ ಧಿಕ್ಕರಿಸಿ
'ರಣಕಲಿ'ಗಳ'ಜೈಕರಿಸಿ
ವಿಜಯವನ್ನಾಚರಿಸುತ
ಸಂಭ್ರಮಿಸೋಣ..!


ಜೈ ಭುವನೇಶ್ವರಿ..!!



ಶುಕ್ರವಾರ, ನವೆಂಬರ್ 04, 2011

Mallikarjuna's Golden Words:-

1) "ಸಜ್ಜನ ಶಿಕ್ಷಕರ ನಾಡು..,!
     ಸತ್ಪ್ರಜೆಗಳ ಬೀಡು..!!" (05/09/2011)


2)"ನೀರು ಕೆಟ್ಟು ವಾಸನೆ ಬರುವುದಕ್ಕೆ ಕಾರಣ ಅದು 
'ಜಲಧಾರೆ'ಯಂತೆ ಹರಿಯದೇ ನಿಂತಿರುವುದು..
ಸಂಬಂಧಗಳು ಹಳಸಿ ದೂರವಾಗುವದಕ್ಕೆ ಕಾರಣ 
'ಒಲವಧಾರೆ' ಹರಿಯದೇ ನಿಂತಿರುವುದು" ♥ (20/10/2011)

Mallikarjuna's Punch Line:-

1)ಎಲ್ರನ್ನೂ Friends ಮಾಡ್ಕೊಳ್ಳಿ ಅಂತಾ ಹೇಳೋ ಜನ
ಹುಡುಗ ಹುಡುಗಿ Friends ಆಗಿದ್ರೂ ಬೇರೇನೇನೋ ಹೇಳ್ತಾರೆ.. :) (07/08/2011)

2)"ಕಣ್ಣಲ್ ಹುಟ್ಟೋ ಪ್ರೀತಿ  'ಕಣ್ಮರೆ'ಯಾಗೋತನಕ..,
ಮನಸಲ್ಲ್ ಹುಟ್ಟೋ ಪ್ರೀತಿ 'ಹೃದಯದ ಬಡಿತ' ನಿಲ್ಲೋ ತನಕ" ♥ ♥ :-)) (19/09/2011)

3)"ಪ್ರೀತಿಯ ತಳಹದಿಯೇ ಸ್ನೇಹ" So..,
ಪ್ರೀತಿ ತುಂಬಿದ ಸ್ನೇಹ ಒಬ್ಬರಿಗೇ ಮೀಸಲು ♥ ♥ 
ಸ್ನೇಹ ತುಂಬಿದ ಪ್ರೀತಿ ಎಲ್ಲರಿಗೂ ಹಂಚಲು" :-) (22/09/2011)

4)"ಮಳೆ 'ಬರದ ನಾಡು'ಎಂದರೆ..??
    ಅದು 'ಬರದ ನಾಡು'ಎಂದೇ ಅರ್ಥ..":-) (11/10/2011)

5)"ಅಂದು:-
ನಮ್ಮ ಮೆಟ್ರೋ.., ಬೇಗ ಕಟ್ರೋ...!
ಇಂದು:-
ನಮ್ಮ ಮೆಟ್ರೋ.., ಬೇಗ ಹತ್ರೋ..!!" :-) (20/10/2011)

6)"ನಿರ್ಮಲ ಪ್ರೀತಿಯಲ್ಲಿರಬೇಕಾದ್ದು
'ತ್ಯಾಗ' ಮತ್ತು 'ಸಮರ್ಪಣೆ'ಯೇ ಹೊರತು, ♥ ♥
'ಸ್ವಾರ್ಥ' ಮತ್ತು 'ಪ್ರತಿಫಲ'ದ ನಿರೀಕ್ಷೆಯಲ್ಲ.." :) (04/11/2011)


7)"ಸಮರ್ಥಿಸುವದಾಗಲೀ.,
ವಿರೋಧಿಸುವದಾಗಲೀ.,
ಅದು ವ್ಯಕ್ತಿಯ ಧೋರಣೆಯನ್ನವಲಂಬಿಸಿರಬೇಕೇ ವಿನಃ
ಕೇವಲ ವ್ಯಕ್ತಿಯನ್ನವಲಂಬಿಸಿರಬಾರದು..!" (10/11/2011)


8)"ಪರಿಚಯವಿರುವ ಕೃತಿಚೌರ್ಯದ ಸ್ನೇಹಿತ ಕು-ಕವಿಗಳಿಗಿಂತ,!
ಪರಿಚಯವಿಲ್ಲದ ಸೃಜನಶೀಲ ನೈಜ ಕವಿಯನ್ನು ನಂಬುವುದೇ ಲೇಸು.!!" (11/11/2011)


9)"'ಹಿತಶತ್ರು'ಗಳ ನಯವಂಚನೆಯ 'ಸವಿ ಮಾತು'ಗಳಿಗಿಂತ.,
'ಕಡು ಶತ್ರು'ವಿನ ಸತ್ಯದ 'ಕಟು ನುಡಿ'ಗಳನ್ನಾಲಿಸುವುದೇ ಮೇಲು..!!" (11/11/2011)


10)"'ಸಮಯಸಾಧಕ' ನೂರು ಜನ ದುಷ್ಟ ಸ್ನೇಹಿತರಿಗಿಂತ.
'ಸಮಯ ಸ್ಪೂರ್ತಿ'ಯ ಒಬ್ಬ ಶಿಷ್ಠ ಸ್ನೇಹಿತನೇ ವಾಸಿ..!"
(11/11/2011)


11) "ಕಲ್ಪನೆಯೆಂದರಿತೂ ವಾಸ್ತವವಾಗಿ ಓದುವ ಸಹೃದಯರು ಚೆನ್ನ,,
ವಾಸ್ತವವೆಂದರಿತೂ ಕಲ್ಪನೆ ಎಂದೇಳುವ ಕವಿ ಹೃದಯ ಚೆನ್ನ..!" :) ♥
(15/11/2011)

‎"ಪ್ರೇಮ ಪಾಠ"












"ಬರೆದೆ ನಾನೊಂದು ಹಾಳೆಯ ಮೇಲೆ  
ಅವಳ ಕುರಿತಾದ ಭಾವನೆಯ.,
ಬರೆದಾದ ಮೇಲರಿವಿಗೆ ಬಂತು 
ಅದಾಗಿದೆ ಪ್ರೇಮ ಪತ್ರವೆಂದು. <3

ಆದರೂ ಕೊಟ್ಟೆ ಅವಳಿಗಾ ಪತ್ರವ 
ನನ್ನೆಲ್ಲಾ ಕನಸುಗಳ ತುಂಬಿ.. :)
ಅವಳೇನು ಮಾಡಿಬಿಟ್ಟಳು..???? 
ನೋಡದೇ ಗಾಳಿಯಲಿ ತೂರಿಬಿಟ್ಟಳು..!! :'(

ಅರಿಯಲಿಲ್ಲವಳು ಅದು ಬರಿ ಪತ್ರವಾಗಿರದೇ
ನನ್ನ ಹೃದಯವಾಗಿತ್ತೆಂದು..!!
ಕಣ್ತೆರೆದು ನೋಡಲಿಲ್ಲವಳು ನನ್ನೀ ಹೃದಯ 
ಒಡೆದು ಚೂರಾಗಿ ರೋಧಿಸುತ್ತಿರುವದೆಂದು..!!

ಪ್ರೀತಿಗೆ ಕಣ್ಣಿಲ್ಲವೆಂದರಿತ್ತಿದ್ದೆ 
ನಾನೆಂದೋ..??
ಪ್ರೀತಿಸುವವರಿಗೂ ಕಣ್ಣಿಲ್ಲವೆಂದರಿತೆ 
ನಾನಿಂದು..!!"

ಪ್ರೀತಿ-ಪ್ರೇಮಗಳೇ ಹೀಗೇನೋ..??
ಬರೀ ಪಾಠಗಳೇ ತುಂಬಿವೆಯೇನೋ..??

ಶನಿವಾರ, ಅಕ್ಟೋಬರ್ 08, 2011

" ಮನಸು "














ಮನಸು ಬಯಿಸಿತೊಂದು ಮನಸ
ಆ ಮನಸು ಈ ಮನಸ ಮೇಲೆ
ಮನಸು ಮಾಡಲಿಲ್ಲ...!

ಕನಸು ಕಂಡ ಮನಸು
ನನಸಾಗಿಸುವಷ್ಟರಲ್ಲೇ...,
ಕನಸಿನೊಂದಿಗೆ ಆ ಮನಸೇ ಮಾಯ..!! :) :( 

"ಒಂದು ಪ್ರೇಮ ಪತ್ರ"


ಕಾಣಲಿಲ್ಲ ನಾ ನಿನ್ನ ಮೊಗವನೆಂದೂ..! 
ಆದರೂ...,
ಅರಿತೆ ನಾ ನಿನ್ನ ಮನವನೆಂದೋ..!!

ಕೇಳಲಿಲ್ಲ  ನಾ ನಿನ್ನ ದ್ವನಿಯನೆಂದೂ..!
ಆದರೂ...,
ತಿಳಿಸುವೆ ನಾ ನನ್ನ ಹೃದಯದ ಮಾತನಿಂದು..!!













ಸಂಧಿಸಲಿಲ್ಲ ನಾ ನಿನ್ನನೆಂದಿಗೂ.!

ಆದರೂ...,
ಮನ ಬಯಸುತಿದೆ ನಿನ್ನನೆಂದೆಂದಿಗೂ.!

ಕನಸು ಕರಗುವ ಮುನ್ನ ಭಾವಗಳರಳಿಸು..!
ಮನಸು ಬಾಡುವ ಮುನ್ನ ಹೃದಯೊಪ್ಪಿಸು..!!


"ಮುಕ್ತ ಮುಕ್ತ"

ಮಣ್ಣ ತಿಂದು ಸಿಹಿ ಹಣ್ಣಕೊಡುವ ಮರ ನೀಡಿ ನೀಡಿ ಮುಕ್ತ.
ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ.
                                                                                        ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ
ಮರೆಯುವುದುಂಟೆ.?ಮರೆಯಲಿ ನಿಂತೆ ಕಾಯುವ ಕರುಣಾಮಯಿಯ





'ತನ್ನಾವರಣವೇ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ.?'
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೆ ಜೀವನ್ಮುಕ್ತಿ

ಹೂ ಮೊಗವಾಡದ ಇರಿಯುವಮುಳ್ಳೇ ಎಲ್ಲಿವರೆಗೆನಿನ್ನಾಟ.? 
ಬೆಳಕಿನ ಕೂಸಿಗೆ ಕೆ೦ಡದ ಹಾಸಿಗೆ,  ಕಲಿಸಿದೆ ಜೀವನ ಪಾಠ.

ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ
ತಡೆಯೆ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೊರಾಟ


ಶುಕ್ರವಾರ, ಅಕ್ಟೋಬರ್ 07, 2011

'ಮುಕ್ತ'

ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ


ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೆ ಜೀವ..
ದಾಟಿ ಈ ಪ್ರವಾಹ..??
'ತಾನು ಬೆಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ.
ನಿಶ್ಚಯದ ಮುರ್ತರೂಪ..!!'














ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ...??
ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಅದೇನೆ ಬಂಧ ಮುಕ್ತ...!!


ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂದ ಮುಕ್ತಿ
ಎಂದು ಆದೇವು ನಾವು ಮುಕ್ತ.., ಮುಕ್ತ.., ಮುಕ್ತ....??






ಬುಧವಾರ, ಅಕ್ಟೋಬರ್ 05, 2011

'ನಿರಶನ - ಪ್ರಹಸನ'












ಉಪವಾಸ..! ಉಪವಾಸ..!!
ಎಲ್ಲೆಲ್ಲೂ ನಡೆದಿದೆ ಉಪವಾಸ.
ಮಾಡಿ ಮಾಡಿ ಉಪವಾಸ
ಮಡಿದವರಾರನು  ಕಾಣೆ..!


ದಿನನಿತ್ಯ ತಿನ್ನಲನ್ನವಿಲ್ಲದೇ
ಅನ್ಯ ದಾರಿ ಕಾಣಲಾಗದೇ.
ಉಪವಾಸ ಮಾಡಿ ಮಾಡಿ
ಮಡಿದ ಬಡ ಜನರೆಷ್ಟೋ..??


ಅನೇಕಾನೇಕ ಕಾರಣಗಳಿಗಾಗಿ
ಮಾಡಿದರು ಉಪವಾಸ..!
ಇಲ್ಲ ಸಲ್ಲದ ಕಾರಣಗಳಿಗಾಗಿಯೂ
ಮಾಡುವರು ಉಪವಾಸ..!!


ಇದುಕೊನೆಗಾಣುವದೆಂದೋ.?


ಈ ಬಡಜನರುಪವಾಸವ
ತೊಲಗಿಸಲುಪವಾಸ
ಮಾಡಿದವರಾರನು ಕಾಣೆ..!
ಭಾಸವಾಗುತಿದೆ ನಿರಶನವೆಂಬುದೇ,

ಮಹಾ ಪ್ರಹಸನವೆಂದು...!! :((













https://www.facebook.com/note.php?note_id=184520264930285


"ಮನ್ವಂತರ"














"ಮರಳಿ ಬಾ ಮನ್ವಂತರವೆ ಕಂಬನಿಗಳ ಬಳಿಗೆ,
ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ.

ಕಣ್ಣೀರೆ ಕಡಲಾಗಿ... ಭಾವಗಳೊ ಬರಡಾಗಿ.
ಮನದ ಮರಳ ತುಂಬಾ ನೋವಿನಲೆಯಬಿಂಬ

ಮನಸಿನ ಪುಟಗಳ ನಡುವೆ ನೆನಪಿನ ನವಿಲು ಗರಿ
ಕಾರ್ಮುಗಿಲ ಅಂಚಿನಲ್ಲಿ ಭರವಸೆಯ ಹೊನ್ನಝರಿ,

ನೀಡು ಬಾ ಮನ್ವಂತರವೆ ಭಾವಕೆ ಉಸಿರನ್ನು
ಬರಡು ಹೃದಯಗಳಿಗೆ ಜೀವದ ಹಸಿರನ್ನು "



ಸೋಮವಾರ, ಅಕ್ಟೋಬರ್ 03, 2011

ನಾನೇ.., ಒಡೆಯ...!!










ನಿನ್ನ ಕುರಿತು ನಾನು ಬರೆದ
'ಒಲವಿನ ಅಕ್ಷರ'ಗಳಿಗೆ
ನಾನೇ...., ಒಡೆಯ..! :)

'ಆ ಅಕ್ಷರ'ಗಳನ್ನೋದಿದ
ನನ್ನೊಲವಿನ ಗೆಳತಿ
ನಿನಗೆ ನಾನೇ ಒಡೆಯ..!! :-))


ಶುಕ್ರವಾರ, ಸೆಪ್ಟೆಂಬರ್ 30, 2011

'ಒಲವು'


ನಗುವ ಹಿಂದೆ
ಇರಬಹುದು ನೋವು :(
ನೋವ ಹಿಂದೆ 
ಇರಲಾರದು ನಗುವು :)
ನೋವಿನಲ್ಲೂ ನಗುವಿದ್ದರೇ..??
ಅದು ಒಲವು..!!!!

ಬುಧವಾರ, ಸೆಪ್ಟೆಂಬರ್ 28, 2011

'ಪ್ರತಿಭೆ'


ಹಾಡುತಾ.. ಹಾಡುತಾ.. ರಾಗ
ಬರೀತಾ...  ಬರೀತಾ... ಕಾವ್ಯ
ತೋಚಿದ್ದ್ದು ಹಾಡುತ್ತಿದ್ದರೇ....
ಗಾಯಕರಾಗುವ  ಲಕ್ಷಣ.
ತೋಚಿದ್ದು ಬರೆಯುತ್ತಿದ್ದರೇ....
ಕವಿಯಾಗುವ  ಲಕ್ಷಣ.
ಏನೂ ಮಾಡದೇ ಸುಮ್ಮನಿದ್ದರೇ..?
ನೋಡಲಿಕ್ಕೆ  ಅವ - ಲಕ್ಷಣ.. :)


https://www.facebook.com/note.php?note_id=184520418263603

ಭಾನುವಾರ, ಮೇ 08, 2011

ಪ್ರತಿಬಿಂಬ


ನಾ ನನ್ನ ಮುಖವ ನೋಡಲು
ಬಯಸುವದಿಲ್ಲ ಕನ್ನಡಿಯಲ್ಲಿ,
ಕಾರಣವಿಷ್ಟೇ..,
ನಾ ನನ್ನ ಮುಖವ ಕಾಣುವೆ
ಅವಳ ಕಣ್ಣ ಕನ್ನಡಿಯಲ್ಲಿ..!

ಗೆಳತಿ



ನನ್ನ ಮುಂದೆ ಸೈಕಲ್ ಏರಿದ ಪೋರಿ,
ನನ್ನ ಹೃದಯವ ಕದ್ದ ಚೋರಿ,
ನೀನೇ ನನ್ನ ಒಲವಿನ ನಾರಿ,
ಬಂದು ತೋರಿಸು ಗೆಲುವಿನ ದಾರಿ,..!

ಕೊಡೆ




ನಾನು ಕೊಟ್ಟೆ ನಿನಗೊಂದು ಕೊಡೆ....!
ನೀನೇನು ಕೊಡ್ತೀಯಾ ನನಗೆ ಕೊಡೆ...!! 

ಜನ್ಮದಿನದ ಶುಭಾಶಯಗಳು


ಭೇಟಿಯಾಗಲು ಮರೆತ ಗೆಳೆತಿಯ..,


'ಹುಟ್ಟು ಹಬ್ಬ'ಕ್ಕೆ...! 


ಮುಖ ಪುಸ್ತಕದಲ್ಲಿ ಪರಿಚಯವಾದ ಗೆಳತಿ,
ನಾವು ಭೇಟಿಯಾಗೋಣವೆಂದ ಗೆಳತಿ,
ಮನಕೆ ಕುತೂಹಲ ಮೂಡಿಸಿದ ಗೆಳತಿ,
ಇಪ್ಪತ್ನಾಲ್ಕು ವಸಂತ ಪೂರೈಸಿದ ಗೆಳತಿ,
ನನ್ನೀ ಕವಿತೆಗೆ ಸ್ಪೂರ್ತಿಯಾದ ಗೆಳತಿ,
ನಮ್ಮಯ ಭೇಟಿಗೆ ನಿನ್ನದೆಂದು ಸಮ್ಮತಿ..?


ನೆನಪಿರಲಿ..! ನಮ್ಮ ಭೇಟಿಯಲಿ,
ಆಡಬಾರದ ಮಾತು ಮನದಲ್ಲುಳಿಯಲಿ,
ಮನದಾಳದ ಮಾತು ಹೊರಹೊಮ್ಮಿಬರಲಿ,
ಈ ನನ್ನ ಉಡೊಗೊರೆ ಹೇಗೇ ಇರಲಿ..,
ಈ ನಿನ್ನ ರಜತ ಹುಟ್ಟುಹಬ್ಬದಲಿ,
ತುಂಬಿರಲಿ ಸಂತಸ ನಿನ್ನ ನಯನ ದಲಿ..!


    ಶುಭವಾಗಲಿ......!!!!!!