ಶನಿವಾರ, ಅಕ್ಟೋಬರ್ 08, 2011

"ಮುಕ್ತ ಮುಕ್ತ"

ಮಣ್ಣ ತಿಂದು ಸಿಹಿ ಹಣ್ಣಕೊಡುವ ಮರ ನೀಡಿ ನೀಡಿ ಮುಕ್ತ.
ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ.
                                                                                        ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ
ಮರೆಯುವುದುಂಟೆ.?ಮರೆಯಲಿ ನಿಂತೆ ಕಾಯುವ ಕರುಣಾಮಯಿಯ





'ತನ್ನಾವರಣವೇ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ.?'
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೆ ಜೀವನ್ಮುಕ್ತಿ

ಹೂ ಮೊಗವಾಡದ ಇರಿಯುವಮುಳ್ಳೇ ಎಲ್ಲಿವರೆಗೆನಿನ್ನಾಟ.? 
ಬೆಳಕಿನ ಕೂಸಿಗೆ ಕೆ೦ಡದ ಹಾಸಿಗೆ,  ಕಲಿಸಿದೆ ಜೀವನ ಪಾಠ.

ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ
ತಡೆಯೆ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೊರಾಟ


2 ಕಾಮೆಂಟ್‌ಗಳು:

  1. ಕಾಮೆಂಟ್ ಮಾಡೋಕೆ ತೀಳಿತಾ ಇಲ್ಲ ಗೌಡ್ರೆ.....!!channagide...

    ಪ್ರತ್ಯುತ್ತರಅಳಿಸಿ
  2. ಹ್ಹ ಹ್ಹ ಅದು ಸರಿ,, ಅದು ಸರಿ..
    ಇಂಥಾ ಭಾವಗೀತೆಗಳಿಗೆ ಕಾಮೆಂಟ್ ಮಾಡೋ ಶಕ್ತಿ ನಮಗೆಲ್ಲಿದೆ ಬಿಡಿ..??
    ತಲೆದೂಗಿ ಅದರ ನೈಜತೆಯನ್ನು ಅನುಭವಿಸಬೇಕು ಅಷ್ಟೇ..!!:-)

    ಪ್ರತ್ಯುತ್ತರಅಳಿಸಿ