ಶನಿವಾರ, ಅಕ್ಟೋಬರ್ 08, 2011

"ಒಂದು ಪ್ರೇಮ ಪತ್ರ"


ಕಾಣಲಿಲ್ಲ ನಾ ನಿನ್ನ ಮೊಗವನೆಂದೂ..! 
ಆದರೂ...,
ಅರಿತೆ ನಾ ನಿನ್ನ ಮನವನೆಂದೋ..!!

ಕೇಳಲಿಲ್ಲ  ನಾ ನಿನ್ನ ದ್ವನಿಯನೆಂದೂ..!
ಆದರೂ...,
ತಿಳಿಸುವೆ ನಾ ನನ್ನ ಹೃದಯದ ಮಾತನಿಂದು..!!

ಸಂಧಿಸಲಿಲ್ಲ ನಾ ನಿನ್ನನೆಂದಿಗೂ.!

ಆದರೂ...,
ಮನ ಬಯಸುತಿದೆ ನಿನ್ನನೆಂದೆಂದಿಗೂ.!

ಕನಸು ಕರಗುವ ಮುನ್ನ ಭಾವಗಳರಳಿಸು..!
ಮನಸು ಬಾಡುವ ಮುನ್ನ ಹೃದಯೊಪ್ಪಿಸು..!!


2 ಕಾಮೆಂಟ್‌ಗಳು:

 1. ಮೊಗವ ಕಾಣದೆ ಮನವನರಿವುದು ಹೇಗೆ?! ಫೋನ್ ಮುಖಾಂತರ?!
  ದ್ವನಿ ಕೇಳದೆ ಫೋನ್ ಮೂಲಕ ಮನವನರಿವುದು ಆಸಾದ್ಯ..
  ಸಂದಿಸದಿದಗ್ಯೂ ಬಯಸುವುದು ಹೇಗೆ ಅಪರಿಚರನ್ನು?!!!!
  confusing this much....

  "ಕನಸು ಕರಗುವ ಮುನ್ನ ಭಾವಗಳರಳಿಸು..!
  ಮನಸು ಬಾಡುವ ಮುನ್ನ ಹೃದಯೊಪ್ಪಿಸು..!!"

  ಕೊನೆಯ ಈ ಎರಡು ಸಾಲುಗಳು ಮಾತ್ರ ಬಹಳ ಮನಸ್ಸಿಗೆ ತಟ್ಟುತ್ತವೆ...superb...

  ಪ್ರತ್ಯುತ್ತರಅಳಿಸಿ
 2. ಹ್ಹ ಹ್ಹ ಹ್ಹ ಹ್ಹ :-)) ಪ್ರೀತಿಯಲ್ಲಿ ಯಾವುದು ಅಸಾಧ್ಯ ಹೇಳಿ..?
  Why're You Confused..??
  It's Very Clear..!:-)
  Actually ಎಲ್ಲರಿಗಿಂತ ಬೇಗ ನಿಮಗರ್ಥವಾಗಬೇಕಿತ್ತು ಇದು :-)
  ಬರವಣಿಗೆಯ ಶಬ್ಧಗಳಲ್ಲಿ ಮನವನರಿಯುವುದು ಸಾಧ್ಯವಿಲ್ಲವೇ..???
  ಮನವನರಿತುಕೊಳ್ಳಲು ಮೊಗವ ನೋಡಲೇಬೇಕಾ..?
  Phone ಮಾಡಲೇ ಬೇಕಾ..? Phone ಮಾಡಿ ದ್ವನಿ ಕೇಳಲೇಬೇಕಾ..?
  ಸಂಧಿಸಲೇಬೇಕಾ..??
  ಹೃದಯದ ಕಣ್ಣಿಗೆ.., ಹೃದಯದ ಕಿವಿಗೆ., ಅದು ಬೇಕಿಲ್ಲ ಅನಿಸುತ್ತೆ ನನಗೆ
  ಸಂಧಿಸದಿದ್ದ ಮಾತ್ರಕ್ಕೆ ಅವರು ಅಪರಿಚಿತರಾಗುತ್ತಾರೆಯೇ..?
  ಮನಕ್ಕೆ ಪರಿಚಯವಾದರೇ ಸಾಕಲ್ಲವೇ..??

  ಕೊನೆಯ ಎರಡು ಸಾಲುಗಳು ಮನಸಿಗೆ ತಟ್ಟುತ್ತವೆ ಎಂದಿರಿ..
  ಬಹಳ ಧನ್ಯವಾದಗಳು..!
  ಈ ಸಣ್ಣ ಬರಹಗಾರನಿಗೆ ಇದಕ್ಕಿಂತ ಹೆಚ್ಚೇನು ಬೇಕು ಹೇಳಿ...?
  Thank You Very Much ಮೌನರಾಗ... :-)

  ಪ್ರತ್ಯುತ್ತರಅಳಿಸಿ