ಸೋಮವಾರ, ಡಿಸೆಂಬರ್ 12, 2011

ಎರಡೂ ಒಂದೇ..! (1+1=1)
ದೇಹವೊಂದೇಯಾದರೂ.,
ಮನಸುಗಳೆರಡು..! :)
ನೋಟವೊಂದೇಯಾದರೂ.,
ಕಣ್ಣುಗಳೆರಡು..! 


ಶ್ರವಣವೊಂದೇಯಾದರೂ.,
ಕಿವಿಗಳೆರಡು..!
ವಾಸನೆ ಗ್ರಹಿಕೆವೊಂದೇಯಾದರೂ.,
ಮೂಗಿನ ರಂಧ್ರಗಳೆರಡು..! 


ಪ್ರೇಮವೊಂದೇಯಾದರೂ.,
ಜೀವಗಳೆರಡು..! ♥ ♥
ಮದುವೆವೊಂದೇಯಾದರೂ.,
ಕುಟುಂಬಗಳೆರಡು..!


ಸೃಷ್ಠಿಯಾಗೋ ಜೀವವೊಂದೇಯಾದರೂ..,
ಮಿಲನವಾಗೋ ಜೀವಗಳೆರಡು..! ;) (1+1=1)3 ಕಾಮೆಂಟ್‌ಗಳು: