ಬುಧವಾರ, ಅಕ್ಟೋಬರ್ 05, 2011

'ನಿರಶನ - ಪ್ರಹಸನ'












ಉಪವಾಸ..! ಉಪವಾಸ..!!
ಎಲ್ಲೆಲ್ಲೂ ನಡೆದಿದೆ ಉಪವಾಸ.
ಮಾಡಿ ಮಾಡಿ ಉಪವಾಸ
ಮಡಿದವರಾರನು  ಕಾಣೆ..!


ದಿನನಿತ್ಯ ತಿನ್ನಲನ್ನವಿಲ್ಲದೇ
ಅನ್ಯ ದಾರಿ ಕಾಣಲಾಗದೇ.
ಉಪವಾಸ ಮಾಡಿ ಮಾಡಿ
ಮಡಿದ ಬಡ ಜನರೆಷ್ಟೋ..??


ಅನೇಕಾನೇಕ ಕಾರಣಗಳಿಗಾಗಿ
ಮಾಡಿದರು ಉಪವಾಸ..!
ಇಲ್ಲ ಸಲ್ಲದ ಕಾರಣಗಳಿಗಾಗಿಯೂ
ಮಾಡುವರು ಉಪವಾಸ..!!


ಇದುಕೊನೆಗಾಣುವದೆಂದೋ.?


ಈ ಬಡಜನರುಪವಾಸವ
ತೊಲಗಿಸಲುಪವಾಸವ
ಮಾಡಿದವರಾರನು ಕಾಣೆ..!
ಭಾಸವಾಗುತಿದೆ ನಿರಶನವೆಂಬುದೇ,

ಮಹಾ ಪ್ರಹಸನವೆಂದು...!! :((













https://www.facebook.com/note.php?note_id=184520264930285


"ಮನ್ವಂತರ"














"ಮರಳಿ ಬಾ ಮನ್ವಂತರವೆ ಕಂಬನಿಗಳ ಬಳಿಗೆ,
ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ.

ಕಣ್ಣೀರೆ ಕಡಲಾಗಿ... ಭಾವಗಳೊ ಬರಡಾಗಿ.
ಮನದ ಮರಳ ತುಂಬಾ ನೋವಿನಲೆಯಬಿಂಬ

ಮನಸಿನ ಪುಟಗಳ ನಡುವೆ ನೆನಪಿನ ನವಿಲು ಗರಿ
ಕಾರ್ಮುಗಿಲ ಅಂಚಿನಲ್ಲಿ ಭರವಸೆಯ ಹೊನ್ನಝರಿ,

ನೀಡು ಬಾ ಮನ್ವಂತರವೆ ಭಾವಕೆ ಉಸಿರನ್ನು
ಬರಡು ಹೃದಯಗಳಿಗೆ ಜೀವದ ಹಸಿರನ್ನು "



ಸೋಮವಾರ, ಅಕ್ಟೋಬರ್ 03, 2011

ನಾನೇ.., ಒಡೆಯ...!!










ನಿನ್ನ ಕುರಿತು ನಾನು ಬರೆದ
'ಒಲವಿನ ಅಕ್ಷರ'ಗಳಿಗೆ
ನಾನೇ...., ಒಡೆಯ..! :)

'ಆ ಅಕ್ಷರ'ಗಳನ್ನೋದಿದ
ನನ್ನೊಲವಿನ ಗೆಳತಿ
ನಿನಗೆ ನಾನೇ ಒಡೆಯ..!! :-))